ಬಂಗಾರ(ದರ!)....


ಮುಗಿಲ ಚುಕ್ಕಿಯಾಗಿದೆ
ಮುಗಿಲ ಚುಕ್ಕಿಯಾಗಿದೆ
ಸಿಗದಷ್ಟು ಎತ್ತರ
ನಿನ್ನ ದರ..........
ಚಿನ್ನದಂಗಡಿಯ ಮುಂದೆ
ಹೆಂಡತಿ ಹೋದರೂ,
ಕಾಲೆಲ್ಲ ಥರ ಥರ...
ಬದಲಾಗಿದೆ ಪ್ರೀತಿಯ ರೀತಿ,,
ನೆನಪಾಗದಿರಲೆಂದು ಹೆಂಡತಿಗೆ
ಕರೆಯುವುದಿಲ್ಲ ಚಿನ್ನಾ ರನ್ನ....
ಅಂಗಡಿಗೆ ಹೋಗುವಾಗಲೆಲ್ಲ
"ನೆನಪಿಟ್ಟು" ಮರೆಯುವೆ,
ಡೆಬಿಟ್, ಕ್ರೆಡಿಟ್ ಕಾರ್ಡ್ ಗಳನ್ನ....
ಮೈತುಂಬ ಬಂಗಾರ ಧರಿಸಿ,
ಮೆರೆವ ಸತಿ......
ಕಳ್ಳ ಕಾಕರಿಂದ ಅವಳ ಕಾಯುವುದು,
ಪತಿಯ ಪರಿಸ್ಥಿತಿ.......
ಏನೆಂದು ಹೇಳಲಿ
ಬಂಗಾರ ನಿನ್ನ ದರದ ಪರಿಯ...
ಮದುವೆಗೋ, ಮುಂಜಿಗೋ,
ಕರೆದೊಯ್ಯಲೂ ಭಯ!
ಹೆಂಡತಿಯ.........!!!!
Really what you have written is hidden truth!!really I enjoyed every line, Keep it up:)
ReplyDeleteದರಕ್ಕೆ ಇಲ್ಲವೇ ಆಧಾರ ,ಕ್ಷಣ ಕ್ಷಣವೂ ನಡುಗಿಸುತ್ತಿದೆ ಥರ ಥರ ಮುಂದೆ ಚಾಲ್ತಿಗೆ ಬರುವುದು ತಾಮ್ರದ ಸರ .........
hahaa.. thanx and nice lines and good joke vani..
ReplyDeleteಶುಭಾ...
ReplyDeleteಸೊಗಸಾಗಿದೆ...
ಗಂಡಂದಿರ ಪಾಡು..ಬಹಳ ಚೆನ್ನಾಗಿ ಮೂಡಿ ಬಂದಿದೆ..
ಇನ್ನಷ್ಟು ಬರಲಿ... ಜೈ ಹೋ !
ಧನ್ಯವಾದಗಳು ಪ್ರಕಾಶಣ್ಣ.. your comment is very precious for me... thank you...
ReplyDeletenija nija.. appata nija.
ReplyDeleteಶುಭಾ ಮೇಡಂ, ನಿಮ್ಮ ಪ್ರಯತ್ನ ಶ್ಲಾಘನೀಯ. ಆದರೆ ಅದು ಚರ್ವಿತ ಚರ್ವಣವಾಗದಿರಲಿ. ನಿಮ್ಮ ಪ್ರಯತ್ನ ಹೊಸ ಕವನಗಳನ್ನು ಗೀಚುವ ಹವ್ಯಾಸವಾಗಲಿ. ಶುಭ ಹಾರೈಸುತ್ತ,
ReplyDelete- ಗುಬ್ಬಚ್ಚಿ ಸತೀಶ್. www.nallanalle.blogspot.com
ಶುಭಾ;ಕವನ ಚೆನ್ನಾಗಿದೆ.ಚಿನ್ನದ ದರದ ಏರಿಕೆಯ ಭರಕ್ಕೆ ಇಲ್ಲವೇ ಮೂಗುದಾರ? ನನ್ನ ಬ್ಲಾಗಿಗೂ ಭೇಟಿ ಕೊಡಿ.ನಮಸ್ಕಾರ.
ReplyDeletethank you very much for all of your valuable comments... and for all of ur blessings...:)
ReplyDeleteGood work. Keep it up :)
ReplyDeleteIdhu Nimma Experiance aa?
ReplyDeleteno
ReplyDelete