Tuesday, June 28, 2011

       ಹೊತ್ತು ಮುಳುಗೋ ಹೊತ್ತು...
                                                      
           

            ಎದ್ದು, ಬಿದ್ದು,
           ಅತ್ತು, ನಲಿದು,
           ನಕ್ಕು ನಕ್ಕು ನೆಗೆದ ದಿನವ,
           ಮತ್ತೆ ಮತ್ತೆ ನೆನೆವ  ಹೊತ್ತು....
          
                      ಎಷ್ಟೋ ಕನಸು,
                      ಇಷ್ಟು ನನಸು,
                      ಭುಜದ ಶಕ್ತಿ,
                      ಮನದ ಯುಕ್ತಿ,
                      ಸೊಕ್ಕು, ಪಟ್ಟು ಮೆರೆದ ಗತ್ತು..!
                      ಮುಗಿದು ಹೋದ ಹೊತ್ತು....

          ಬೆಟ್ಟದಷ್ಟು, ಪ್ರೀತಿ ಕೊಟ್ಟು,
          ಮುಷ್ಠಿ ಪ್ರೀತಿಗಾಗಿ ಕಾದು,
          ಸೋತು ಕಣ್ಣಂಚಲಿ,
          ಬತ್ತಿದ ಕಣ್ಣೀರ ಗುರುತು..!
          ಬದುಕು ನೀರವವಾಗೋ ಹೊತ್ತು...

                       ಬೆನ್ನು ಭಾರ ಬಾಗಿ ಬಾಗಿ,
                       ಹೊರಲಾರದ ಮುದಿತನ
                       ಹೆಜ್ಜೆಗುರುತು ಕಾಣದಂತೆ,
                       ಮುಗಿದುಹೋಯ್ತು ಯವ್ವನ...
            ಹೊತ್ತೇ   ಸಾಗದು,
            ಹೊತ್ತೇ  ಹೋಗದು,
            ಮುದಿಜೀವದ,, "ಜೀವ"
           'ಅಸ್ತಂಗತಕೆ ಸಾಗೋ ಹೊತ್ತು'..
           'ಜೀವನದ',
           "ಹೊತ್ತು ಮುಳುಗೋ ಹೊತ್ತು"...!!

14 comments:

  1. ಹೊತ್ತು ಮುಳುಗೋ ಹೊತ್ತು.. ಅರ್ಥವತ್ತಾಗಿದೆ. ಜೊತೆಯಲ್ಲಿ ಅರ್ಥವತ್ತಾದ ಬದುಕು ನಡೆಸಲಾಗಲಿಲ್ಲವೆ೦ಬ ನಿರಾಸೆಯನ್ನು ಬಿ೦ಬಿಸುವಲ್ಲಿ ಕವನ ಯಶಸ್ವಿಯಾಗಿದೆ, ಶುಭಾ ಅವರೆ. ಅಭಿನ೦ದನೆಗಳು.

    ಅನ೦ತ್

    ReplyDelete
  2. ಶುಭಾ,
    ಅರ್ಥಪೂರ್ಣ ಕವನ..

    "ಹೊತ್ತು ಮುಳುಗೋ"ಕವನ....
    ಇದೆಯಲ್ಲವೇ?ಜೀವನ.

    ReplyDelete
  3. Shubha! Its really good one.. Keep it up.

    ReplyDelete
  4. anant ji, jyoti, girish and vani..thank u soo much for the comments..:)

    ReplyDelete
  5. ಬದುಕಿನ ಎಷ್ಟೋ ಮಜಲನ್ನು ಸೆರೆಹಿಡಿದಿದ್ದೀರಿ.



    _ನನ್ನ ಬ್ಲಾಗಿಗೂ ಬನ್ನಿ.

    ReplyDelete
  6. badukina vividha majalugaLa chitraNa ee kavana....

    chennaagide ...munduvarisi....

    ReplyDelete
  7. ಈ ಕವನ ತುಮ್ಬಾ ಚೆನ್ನಾಗಿದೆ.ಬದುಕಿನ ನೈಜತೆಯನ್ನು ಬಿ೦ಬಿಸಿದ್ದೀರಿ.-ನನ್ನ ಬ್ಲಾಗಿಗೂ ಭೇಟಿ ನೀಡಿ.

    ReplyDelete
  8. thank you dinakar sir, and ushodaya..

    ReplyDelete
  9. ಯೌವನದ ಸೊಕ್ಕು,
    ಮುದಿತನದ ಸುಕ್ಕು ,
    ತುಂಬಾ ಚೆನ್ನಾಗಿ ಶಬ್ದ ಗಳಲ್ಲಿ ವರ್ಣಿಸಿದ್ದಿರಿ...

    ನನ್ನ ಬ್ಲಾಗ್ ಗೂ ಬನ್ನಿ..

    ReplyDelete
  10. ಉತ್ತಮವಾಗಿದೆ.
    ನನ್ನ ಭಾವ ಲೋಕಕ್ಕೆ ಒಮ್ಮೆ ಬನ್ನಿ, ತಮಗಿದೋ ಸವಿನಯ ಆಮಂತ್ರಣ....
    http://spn3187.blogspot.in/

    ReplyDelete