ಬಂಗಾರ(ದರ!)....


ಮುಗಿಲ ಚುಕ್ಕಿಯಾಗಿದೆ
ಮುಗಿಲ ಚುಕ್ಕಿಯಾಗಿದೆ
ಸಿಗದಷ್ಟು ಎತ್ತರ
ನಿನ್ನ ದರ..........
ಚಿನ್ನದಂಗಡಿಯ ಮುಂದೆ
ಹೆಂಡತಿ ಹೋದರೂ,
ಕಾಲೆಲ್ಲ ಥರ ಥರ...
ಬದಲಾಗಿದೆ ಪ್ರೀತಿಯ ರೀತಿ,,
ನೆನಪಾಗದಿರಲೆಂದು ಹೆಂಡತಿಗೆ
ಕರೆಯುವುದಿಲ್ಲ ಚಿನ್ನಾ ರನ್ನ....
ಅಂಗಡಿಗೆ ಹೋಗುವಾಗಲೆಲ್ಲ
"ನೆನಪಿಟ್ಟು" ಮರೆಯುವೆ,
ಡೆಬಿಟ್, ಕ್ರೆಡಿಟ್ ಕಾರ್ಡ್ ಗಳನ್ನ....
ಮೈತುಂಬ ಬಂಗಾರ ಧರಿಸಿ,
ಮೆರೆವ ಸತಿ......
ಕಳ್ಳ ಕಾಕರಿಂದ ಅವಳ ಕಾಯುವುದು,
ಪತಿಯ ಪರಿಸ್ಥಿತಿ.......
ಏನೆಂದು ಹೇಳಲಿ
ಬಂಗಾರ ನಿನ್ನ ದರದ ಪರಿಯ...
ಮದುವೆಗೋ, ಮುಂಜಿಗೋ,
ಕರೆದೊಯ್ಯಲೂ ಭಯ!
ಹೆಂಡತಿಯ.........!!!!